Skip to main content

Posts

ನಿಲ್ದಾಣ

ಕವನದ ಶೀರ್ಷಿಕೆ : ನಿಲ್ದಾಣ  ರಾತ್ರಿ ಜೊತೆಯಲಿ ಊಟ ಮಾಡಿ ಕೆನ್ನೆಗೆ ಸಿಹಿ ಮುದ್ರೆಯನ್ನೋತ್ತಿ ಹೆಜ್ಜೆ ಮೂಡದ ಹಾದಿಯಲಿ ಬೂಟು ಕಾಲಿನ ನೆರಳಿನಲ್ಲಿ ರಾತ್ರಿಕೆಲಸಕ್ಕೆ ಹೊರಟಿದ್ದ ರಾಜಕುಮಾರ ಬಾಳಿನಾಸೆಯ ಬುತ್ತಿ ಸೆಳೆದಿತ್ತು ಸುಖದ ಅಮಲು ಮದುವೆಯ ತರಿಳು ತೋರಣದ ಹಸಿರು ಮಾಸುವ ಮುನ್ನ ಮೊಗದ ಅರಿಸಿನ ಜಾರುವ ಮುನ್ನ ರಾಜಕುಮಾರಿಗೆ ಮಾಯದ ನಿದ್ದೆ ರಿಂಗಣಿಸಿದ ಫೋನು ಹಾಯ್ ಎಲ್ಲಿದ್ದಿಯಾ? ನಾವಿಲ್ಲಿದ್ದೇವೆ ಬಂದು ಬಿಡು ಇಲ್ಲಿಗೆ. ಕೆಲಸಕ್ಕೆಂದು ಹೊರಟ ಕಾಲು ಹಿಂಬಾಲಿಸಿತ್ತು ಮತ್ತೇನನ್ನೋ ಹುಟ್ಟುಹಬ್ಬದ ಆಚರಣೆಯ ಗುಂಗಿನಲ್ಲಿ ಮೈಯೊಳಗೆ ಇಳಿದಿದ್ದು ಸುರಪಾನದ ಅಮಲು ಮತ್ತೊಮ್ಮೆ ರಿಂಗಣಿಸಿತ್ತು ಅದೇ ಫೋನ್! ಬೇಗ ಬಾ ನಿನಗಾಗಿ ಕಾಯುತ್ತಿದ್ದಾರೆ ಇಲ್ಲಿ ಹೊರಟ ಹೊರಟ ನೆತ್ತಲೋ ಅತಿವೇಗದಲಿ, ಸುಮ್ಮನೆ ಬಿಟ್ಟಿತೇ? ಬಂದರು ಯಕ್ಷ ಕಿನ್ನರ ಪ್ರೇತಗಳು ಪೀಕು ದ್ವನಿಯ ಮಾಡುತ್ತ ಕರೆದೊಯ್ದರು ಮತ್ತೆ ಕರೆತರಲಾಗದೂರಿಗೆ ಮೊಲ್ಲೆ ಮಲ್ಲಿಗೆಯ ಘಮಲು  ಆರಿರದ ಮೈಗೆ ರಕ್ತದ ನಾಥ ಹೊತ್ತೊಯ್ದರು ಅನಾಥ ಶವದಂತೆ ಬಿದ್ದ ಬಾಡಿಯನು ಇಹಲೋಕದ ಅಪತ್ಭಾಂದವರು ಆಪತ್ತಿಗೆ ಆಹೊತ್ತಿಗೆ ಇದ್ದು ಇಲ್ಲದಂತಿದ್ದವರು ಇರಳು ಶಯ್ಯಾಗೃಹದಲ್ಲಿ ಮಲ್ಲಿಗೆ ಹಾರವಿಲ್ಲ ಊದುಬತ್ತಿಯ ಸುಗಂಧವಿಲ್ಲ ತಲೆಗೆ ತುಪ್ಪಳದ ತಲೆದಿಂಬಿಲ್ಲ ಆ ನತದೃಷ್ಟ ರಾಜಕುಮಾರನಿಗೀಗ ಮಾಯ ನಿದ್ರೆ ಹಗಲು ಕಾಗೆ ಗುಬ್ಬಿಗಳಿರದ ನೀರವತೆ ಚಂದ್ರ ತಾರೆಗಳಿರದ ತಂಪು ಗಾಳಿಯಿರದ  ಸುಡುಬಿಸಿಲ ಸ್ವರ್ಗದಲ್ಲಿ ಅವಳು ಎದ್ದಿದ್ದಾ
Recent posts

ರಸಪ್ರಶ್ನೆಗಳು

 1. ಬಕ್ಸಾರ್ ಕದನದ ನಾಯಕತ್ವ ವಹಿಸಿದ್ದ ಬ್ರಿಟಿಷ್ ಅಧಿಕಾರಿ. ಹೆಕ್ಟರ್ ಮನ್ರೋ 2. ಮೀರ್ ಜಾಫರ್ ಮರಣ ಹೊಂದಿದ ವರ್ಷ. 1765 3. ಮೀರ್ ಜಾಫರ್ ನ ಮರಣದ ನಂತರ ಬಂಗಾಳದ ನವಾಬರಾದವರು.? ನಿಜಾಮ ಉದ್ಧವಲ್  4. ಬ್ರಿಟಿಷರು ಮತ್ತು ಫ್ರೆಂಚರ ನಡುವೆ ಭಾರತದಲ್ಲಿ ನಡೆದ ಯುದ್ದಗಳು. ಕರ್ನಾಟಿಕ್ ಯುದ್ಧಗಳು 5. ಕರ್ನಾಟಿಕ್ ಸಂಸ್ಥಾನದ ಅಂದಿನ ರಾಜಧಾನಿ ಯಾವುದಾಗಿತ್ತು. ಆರ್ಕಾಟ್ 6. ಯಾವ ಒಪ್ಪಂದದೊಂದಿಗೆ ಮೊದಲ ಕರ್ನಾಟಿಕ್ ಯುದ್ಧ ಅಂತ್ಯವಾಯಿತು. ಎಕ್ಸ್ ಲಾ ಚಾಪೆಲ್ ಒಪ್ಪಂದ 7. ಎರಡನೇ ಕರ್ನಾಟಿಕ ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯವಾಯಿತು. ಪಾಂಡಿಚೇರಿ ಒಪ್ಪಂದ 8. ಎರಡನೇ ಕರ್ನಾಟಿಕ್ ಯುದ್ಧ ಮುಗಿದ ವರ್ಷ. 1754 9. ಮೂರನೇ ಕರ್ನಾಟಿಕ ಯುದ್ಧ ನಡೆದ ಸ್ಥಳ. ವಾಂಡಿವಾಷ್ 10. ಮೂರನೇ ಕರ್ನಾಟಿಕ್ ಯುದ್ಧ ನಡೆದ ವರ್ಷ. 1760 11. ಯಾವ ಒಪ್ಪಂದದೊಂದಿಗೆ ಮೂರನೇ ಕರ್ನಾಟಿಕ್ ಯುದ್ಧ ಅಂತ್ಯವಾಯಿತು. ಪ್ಯಾರಿಸ್ ಒಪ್ಪಂದ 12. ಸಹಾಯಕ ಸೈನ್ಯ ಪದ್ಧತಿ ಕಾಯ್ದೆ ಜಾರಿಗೆ ತಂದ ಗವರ್ನರ್. ಲಾರ್ಡ ವೆಲ್ಲೆಸ್ಲಿ 13. ಸಹಾಯಕ ಸೈನ್ಯ ಪದ್ಧತಿ ಜಾರಿಗೆ ಬಂದ ವರ್ಷ. 1798 14. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದ ಗವರ್ನರ್. ಲಾರ್ಡ್ ಡಾಲ್ ಹೌಸಿ 15. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ಬಂದ ವರ್ಷ. 1848 16. ಹೆಚ್ಚಿನ ಕಂದಾಯ ವಸೂಲಿಗಾಗಿ ಭೂಮಿಯನ್ನು ಹರಾಜು ಮಾಡುವ ಪದ್ಧತಿ ಜಾರಿಗೆ ತಂದ ಗವರ್ನರ್. ವಾರನ್ ಹೇಸ್ಟಿಂಗ್ಸ್ 17. ಖಾಯಂ ಜಮೀನ್

ಹಿಗ್ಗಿನ ಸುಗ್ಗಿ

 ಶೀರ್ಷಿಕೆ : ಹಿಗ್ಗಿನ ಸುಗ್ಗಿ ಚುಮುಚುಮು ಚಿಗುರೆಲೆ, ಹೊಸ ಪಸಿರು ಬಣ್ಣ ಬಣ್ಣದ ರಂಗಿನ ಹೊಸ ಕಳೆ ಹಿಗ್ಗಿ ಹಿಗ್ಗಿ ಸುಗ್ಗಿಯ ಹರುಷದ ಹೊನಲು ಪಳ ಪಳ ಕಂಗೊಳಿಸಿತಿಹಳು ಭೂರಮೆ ಕರ ಕರ ಚಪ್ಪರಿಸುತ ಸವಿಯುವ ಚಕ್ಕುಲಿ ಎಳ್ಳುoಡೆ ಜಿಗಿ ಜಿಗಿ ನೊಣವ ಅಟ್ಟುತ ಕಬ್ಬಿನ ರಸವ ಹೀರುವ ಘಮ ಘಮ ತುಪ್ಪದಲ್ಲಿ ಎಳ್ಳೂಹೋಳಿಗೆ ಅದ್ದಿ ತಿನ್ನೋಣ ಡುಂ ಡುಂ ಸದ್ದಿನಲಿ ಗೆದ್ದ ಎತ್ತುಗಳ ಜಾಥಾ ನೆಡೆಸೋಣ ತಕ ತಕ ಕುಣಿಯುತ್ತಾ ಬೀದಿಗೆ ಬಂದಿದೆ ಕರಡಿ ರಂಗು ರಂಗಿನ ರಿಬ್ಬನ್ನು ಕೊಡಿಗೆ ಕಟ್ಟಿಕೊಂಡಿಹ ಕೊಲೆ ಬಸವ ಮಿಣಿ ಮಿಣಿ ಮಿಂಚುವ ಉಡುಗೆ ತೊಟ್ಟಿಹಳು ಕೊರವಂಜಿ ಜುಳು ಜುಳು ಗಂಗೆಯನ್ನು ಶಿರದ ಮೇಲೆ ಹೊತ್ತ ಒಕ್ಕಲು ಎಳ್ಳು ಬೆಲ್ಲವ ಸವಿಯುತ ಒಳ್ಳೆಯ ಮಾತನಾಡುತ ಉಯ್ಯಾಲೆಯ ಸುಖ ದುಃಖಗಳ ಸಮಾವಾಗಿ ತೂಗುತ ಚಳಿಗೆ ಮುದುಡಿದ ಮೈಯ ಸೂರ್ಯ ರಶ್ಮಿಗೆ ಒಡ್ಡುತ ಕುಗ್ಗದೆ, ಹಿಗ್ಗದೆ ಸಮ ಚಿತ್ತದಲಿ ಸಾಗೋಣ ವಿಪ್ಲವದ ಪತಂಗ